Categories
Uncategorized

ಹಳೆ ಚಿತ್ರ, ಹೊಸ ತಂತ್ರ

Whatsapp, smartphone, email, video call ಮುಂತಾದ technology ಬರುವ ಮುನ್ನ ಬಂದ  ಚಲನಚಿತ್ರಗಳ ಕಥಾವಸ್ತು ಇವೆಲ್ಲಾ ಆವಿಷ್ಕಾರಗಳು ಆ ಸಮಯದಲ್ಲಿ ಇದ್ದಿದ್ದ್ರೆ ಏನಾಗುತ್ತಿತ್ತು? ೨ ಘಂಟೆಯ ಕಥೆ ಎರಡು ನಿಮಿಷಕ್ಕೆ ಮುಗಿಯುತ್ತಿತ್ತಾ? ಅಥವಾ ಹೊಸ ತಿರುವು ತೊಗೊಳುತ್ತಿತ್ತಾ? ನಮ್ಮ ಜೀವನವನ್ನೇ ಬದಲಿಸಿರುವ technology ನಮ್ಮ ಮೆಚ್ಚಿನ ಚಲನಚಿತ್ರಗಳನ್ನು ಕೂಡ ಬದಲಿಸುತ್ತಿತ್ತ್ತಾ? ಈ ಪ್ರಶ್ನೆಗಳ ಬಗ್ಗೆ ಕೆಲವು ದಿನ ಹಿಂದೆಗಳ ಯೋಚಿಸುತ್ತಿದ್ದೆ. ಬೇರೆ ಏನೂ ಕೆಲಸ ಇರದಿದ್ದ ಕಾರಣ.  ನನಗೆ ಸಿಕ್ಕ ಉತ್ತರ ಏನು? ಬನ್ನಿ ನೋಡೋಣ, ಮುಂದಿನ paragraph ಗಳಲ್ಲಿ, ಕೆಲವು ಉದಾಹರಣೆಗಳೊಂದಿಗೆ. 

ಅನೇಕ ಚಿತ್ರಗಳಲ್ಲಿ kidnapping ಇರುತ್ತಿತ್ತು. ಯಾರು ಕರೆ ಮಾಡುತ್ತಿದ್ದಾರೆ, ಎಲ್ಲಿಂದ ಕರೆ ಮಾಡುತ್ತಿದ್ದಾರೆ ಗೋತ್ತಾಗುತ್ತಿರಲಿಲ್ಲ. ಹಾಗಾಗಿ kidnapper-ನ ಕಂಡು ಹಿಡಿಯೋದು ಕಷ್ಟ ಆಗೋದು, atleast ಚಿತ್ರಗಳಲ್ಲಿ. (ಅದೂ ಅಲ್ಲದೆ, ಅದ್ಯಾಕೋ ಆಗಿನ ಕಾಲದ ಚಿತ್ರಕಥೆಯ police, hero villain-ನ ಹಿಡಿದು ಬಡಿದ ಮೇಲೆಯೇ ಬರುತ್ತಿದ್ದಿದು. ಹೀಗಿರುವಾಗ, police ಬಂದು kidnapper ನ ಹಿಡಿಯೋದು ಸಾಧ್ಯ ಇರುತ್ತಿರಲಿಲ್ಲ).  ಆದರೆ Truecaller ಇದ್ದಿದ್ದ್ರೆ? ಜೊತೆಗೆ GPS ಮೂಲಕ ಎಲ್ಲಿಂದ kidnapper ಫೋನ್ ಮಾಡ್ತಿದಾನೆ ಅಂತಲೂ ತಿಳಿದಿದ್ದರೆ? ಕೆಲವೇ ನಿಮಿಷಗಳಲ್ಲಿ kidnapper ಸಿಕ್ಕಾಕೊಳೋನು. ಕಥೆ ಮುಗಿಯೋದು. 

ಅನಂತ್ ನಾಗ್ ಅಭಿನಯದ ಬೆಳದಿಂಗಳ ಬಾಲೆ ಚಿತ್ರದಲ್ಲಿ, ನಾಯಕ ನಟಿ ಪರದೆಯ ಮೇಲೆ ಬರುವುದೇ ಇಲ್ಲ. ಕೇವಲ ಫೋನ್ ಅಲ್ಲಿ ನಾಯಕ ನಟನನ್ನ ತನ್ನ ಹುಡುಕಾಟದ ಗೊಂದಲದಲ್ಲಿ ಬಹಳ ರೋಮಾಂಚಕವಾಗಿ ಸಿಲುಕಿಸುತ್ತಾಳೆ. ಹೆಸರು ಕೂಡ ಹೇಳಲ್ಲ. ಆದರೆ Truecaller ಇದ್ದಿದ್ದ್ರೆ? ಮೊದಲ್ನೇ phone ಕಾಲ್-ಗೆ ಕಥೆ ಮುಗಿಯೋದು. 

ಗಣೇಶನ ಮದುವೆ ಚಿತ್ರದಲ್ಲಿ, ನಾಯಕನಟಿ All India Radio ಅಲ್ಲಿ ಪ್ರಸಿದ್ಧ ಗಾಯಕಿ. ಅವಳ ನಿಜವಾದ ಹೆಸರು ಬೇರೆ. Google ಇರದ ಆ ಕಾಲದಲ್ಲಿ search ಮಾಡಿ ಅವಳ ಬಗ್ಗೆ ಹೆಚ್ಚಿನ ಮಾಹಿತಿ, photo ಸಿಗುವ ಹಾಗಿರಲಿಲ್ಲ. ಹಾಗಾಗಿ ಅವಳ fan ಆಗಿದ್ದ ನಾಯಕ ನಟನಿಗೆ ತನ್ನ ವಠಾರದಲ್ಲೇ ಅವಳು ಇರೋದು ಎಂಬ ಮಾಹಿತಿ ಇರಲಿಲ್ಲ. ಅದೂ ಅಲ್ಲದೆ ಟ್ವಿಟ್ಟರ್ Facebok , Instagram ಕೂಡ ಇರಲಿಲ್ಲ. ಇಂದಿನ ಎಲ್ಲಾ ಕಲಾವಿದರು ಇಲ್ಲೇಲ್ಲಾದ್ರೂ ಇದ್ದೆ ಇರುತ್ತಾರೆ. ಇವೆಲ್ಲಾ ಇದ್ದಿದ್ದ್ರೆ, ಗಣೇಶ ಪತ್ರಬರೆಯುವ ಬದಲು, ಕೆಲವೇ ದಿನಗಳಲ್ಲಿ ವಠಾರದಲ್ಲಿಯೇ ಶ್ರುತಿಯನ್ನು ಭೇಟಿಮಾಡುತ್ತಿದ್ದ. ತಾನೇ Y G Rao ಅಂತಹೇಳಿ ಮಾದುವೆ ಆಗುತ್ತಿದ್ದ. ಜೊತೆಗೆ ಗಣೇಶನ ಅಮ್ಮ ಕ್ರಿಕೆಟ್ ಸ್ಸ್ಕೋರ್ಗೋಸ್ಕರ ನೂಕುನುಗ್ಗುಲುಗಳಲ್ಲಿ ಹೋಗಬೇಕೀರ್ತಿರ್ಲಿಲ್ಲ.phone ಅಲ್ಲೇ ಸ್ಕೊರ್ ನೋಡಬೋದಿತ್ತು.

Whatsapp , Facebook ಇರೋದ್ರಿಂದ ಎಲ್ಲರ ‘’ಪದ್ಯ”ಗಳಿಗೂ ಇಂದು ಓದುಗರುಂಟು, ‘ಓದುಗ ದೊರೆಗಳು’ ಉಂಟು. Kindle ಇರೋದ್ರಿಂದ ಎಲ್ಲಾ ಪದ್ಯಗಳು ಪುಸ್ತಕ ರೂಪ ಪಡೆಯಲು ಯಾವ ಕಷ್ಟವೂ ಇಲ್ಲ. ಇಂದು ಪ್ಯಾಸಾ ಚಿತ್ರದ “ವಿಜಯ್” ಇದ್ದಿದ್ದ್ರೆ? ಬಹುಷಃ ವಿಜಯ್ ರಾಷ್ಟ್ರಕವಿ ಆಗಿ ಪ್ರಶಸ್ತಿ ಪಡೆಯುತ್ತಿದ್ದ. ಅದೇನೇ ಆಗಲಿ ಮೊದಲು software ಇಂಜಿನಿಯರ್ ಆಗಿರುತ್ತಿದ್ದ. ಆಮೇಲೆ  Facebook , Whatsapp ಗಳಲ್ಲಿ ಕವಿಯಾಗಿ ಮೂಡಿ, Kindle ಅಲ್ಲಿ ಖ್ಯಾತಿ ಪಡೆಯುತ್ತಿದ್ದ. Kindle ಪುಸ್ತಕ ಮಾರಾಟವಾಗದೆ ಇದ್ದರೂ ಜೀವನೋಪಾಯಕ್ಕೆ ಅಪಾಯವಿರದ ಕಾರಣ, ಕಂಡೊರ್ಮೇಲೆಲ್ಲಾ ಕೋಪ ಮಾಡ್ಕೋತಿರ್ಲಿಲ್ಲ. ಪ್ಯಾಸಾ ಒಬ್ಬ ಹವ್ಯಾಸಿ ಕವಿಯ ಪ್ರೇಮಕಥೆಯಾಗಿ ಮಾರ್ಪಡುತ್ತಿತ್ತು.

ಹೀಗೆ ಅನೇಕ ಚಲನ ಚಿತ್ರಗಳ ಕಥೆಗಳನ್ನು,  ಹೊಸ ತಂತ್ರಜ್ಞಾನದ ನೆಲೆಯಲ್ಲಿ ನೋಡಿದಾಗ, ಅದರ ಕಥೆಯೇ ಬೇರೆ ಆಗುವುದು. ಆದ್ದರಿಂದ ಹಾಗೆಲ್ಲ ನೋಡಬಾರದು. ಅಂದಿನ ಚಿತ್ರವನ್ನು, ಅಂದಿನ ಚೌಕಟ್ಟಿನಲ್ಲಿ ನೋಡಿ ಖುಷಿ ಪಡಬೇಕು. ಅಷ್ಟೇ. 

– ಹರೀಶ

Categories
Uncategorized

ಜನಪರ, ಜನಪ್ರಿಯ AI / ML

ಈಚಿನ ದಿನಗಳಲ್ಲಿ ಎಲ್ಲ್ಲಾ software ಸಂಸ್ಥೆಗಳ ಬಾಯಲ್ಲಿ ಬರುವ ಏಕೈಕ ಮಂತ್ರ – AI, ML (artificial intelligence, machine learning). ವಿಶ್ವಶಾಂತಿ , ಸುಖ, ಸಮೃದ್ಧಿ ಎಲ್ಲವನ್ನೂ ಕೊಡಬಲ್ಲ ಕಾಮಧೇನು ಎಂಬಂತೆ ಎಲ್ಲರೂ ಇದರ ಮಹಿಮೆಯನ್ನು ಬಣ್ಣಿಸುವರು. ಹೀಗೆ ಮಾತಾನಾಡುವ ಮಂದಿಗೆ ಈ ವಿಷಯದಲ್ಲಿ ಜ್ಞಾನ ಅಥವಾ ಅನುಭವ ಸಾಮಾನ್ಯವಾಗಿ ಇರಲ್ಲ. ರಾಜಕಾರಣಕ್ಕೆ ಇಳಿಯಲು ಹೇಗೆ ಯಾವ ಜ್ಞಾನಾರ್ಹತೆ ಅಥವಾ ಅನುಭವು ಬೇಡವೋ ಹಾಗೆ. ಈ ಒಂದು ಆಧಾರದ ಮೇಲೆ ನಾನೂ ಕೂಡ ಇದರ ಬಗ್ಗೆ ಏನ್ ಬೇಕಾದರೂ ಬರೀಬಹುದು ಎಂಬುವ ಧೈರ್ಯ.

ನಾನು engineering ಓದುತ್ತಿದ್ದಾಗ ಅನೇಕ professor-ಗಳು ನಮ್ಮ ಪರೀಕ್ಷಾ ಸಿದ್ಧತೆಗೆ ನೆರವಾಗುವಂತೆ ಹತ್ತೋ ಇಪ್ಪತ್ತೋ ಪ್ರಶ್ನೆಗಳನ್ನು ಕೊಟ್ಟು, ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳು ಇದರಲ್ಲಿಯೇ ಸೀಮಿತವಾಗಿರುತ್ತೆ ಅನ್ನುತ್ತಿದ್ದರು. ಕೆಲವೊಮ್ಮೆ ಪರೀಕ್ಷೆಯಲ್ಲಿ ಐದು ಪ್ರಶ್ನೆ ಇದ್ದರೆ, ಈ ಮಾದರಿ ಪ್ರಶ್ನಪತ್ರಿಕೆಯಲ್ಲೂ ಅದೇ ಐದು ಪ್ರಶ್ನೆ ಇರುತ್ತಿತ್ತು. ಹೀಗಾಗಿ ಪರೀಕ್ಷೆಯ ಜಂಜಾಟದಲ್ಲಿ ಸಿಲುಕದೆ ಆಟ-ಊಟಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಇವೆಲ್ಲ ಅಂತ ಮನೋಭಾವ ಇರೋ professor-ಗಳು ಸಿಗುವುದರ ಮೇಲೆ ಆಧಾರಿತವಾಗಿತ್ತು. Professor ಯಾರೇ ಇರಲಿ, ಕಲ್ಲು ಹೃದಯದ ಕಟು ಮನಸ್ಸಿನವರಾಗಿರಲಿ, ಪ್ರಶ್ನ ಪತ್ರಿಕೆಯ ಮುನ್ನೋಟ ವಿದ್ಯಾರ್ಥಿಗಳಿಗೆ ದೊರೆಯುವುದು ಅತಿ ಮುಖ್ಯ. ಈ ದಿಕ್ಕಿನಲ್ಲಿ AI, ML ಉಪಕಾರಿಯಗುವುದು. ಹಿಂದಿನ ಪ್ರಶ್ನಪತ್ರಿಕೆಗಳನ್ನು ಮತ್ತು ಅವುಗಳನ್ನು ರಚಿಸಿದ Professor-ಗಳನ್ನು ಒಂದು ‘dataset’ ಆಗಿ ಪರಿಗಣಿಸಿ ಅದನ್ನು ‘train’ ಮಾಡಿ ಈ ವರ್ಷದ ಪ್ರಶ್ನ ಪತ್ರಿಕೆಯನ್ನು AI/ML ಮೂಲಕ ಮುಂಚಿತವಾಗಿಯೇ ನಿರ್ಧರಿಸಬಹುದು.  ತಮ್ಮ ಮಕ್ಕಳು 110/100 ಮಾರ್ಕ್ಸ್ ಪಡೆಯಬೇಕೆಂದು ಹಂಬಲಿಸುವ ಹಲವು ಪೋಷಕರು ಈ ರೀತಿಯ ‘ಮಾದರಿ’ ಪ್ರಶ್ನಪತ್ರಿಕೆಯನ್ನು ಕೊಂಡುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. 

ಪರೀಕ್ಷೆ, ಪೋಷಕರು, ಪ್ರಶ್ನಪತ್ರಿಕೆಗಳಿಂದ ಜ್ಯೋತಿಷ್ಯಕ್ಕೆ ಬಂದುಬಿಡೋಣ. ಕನ್ನಡ stand-up comedians ವಿಷಯ ಬದಲಿಸುವ ತರ. ಒಂದು ರಾಶಿಯಲ್ಲಿ ಹುಟ್ಟಿದ ಅನೇಕರ ಮಾಹಿತಿಯನ್ನು, ಒಂದಿಷ್ಟು ಸಂಬಂದವಿಲ್ಲದ random events-ಅನ್ನು ಮತ್ತು ಅಂದಿನ ರಾಜಕೀಯ / ಸಾಮಾಜಿಕ ಆಗುಹೋಗುಗಳನ್ನ ಇಟ್ಟುಕೊಂಡು , machine learning ಉಪಯೋಗಿಸಿ ಆ ರಾಶಿಯವರಿಗೆ ಯಾವತ್ತು ಏನಾಗುತ್ತೆ ಅಂತ ಹೇಳುವ app ಮಾಡಬೇಕು. ಜ್ಯೋತಿಷ್ಯ ಜನರ ಕೈಗೆ (ಮೊಬೈಲ್ app ಆಗಿರೋ ಕಾರಣ) ಸಿಗುತ್ತೆ. ಜ್ಯೋತಿಷಿಗಳ ಹಾವಳಿಗೆ ಸಿಲುಕದೆ ಜನರುಶಾಂತಿ ಸಮೃದ್ಧಿ ಸ್ಥಾಪಿಸಿಕೊಳ್ಳುತ್ತಾರೆ.

ಜ್ಯೋತಿಷ್ಯದಷ್ಟೇ ಜನಪ್ರಿಯ ವಸ್ತು ಅಂದರೆ ಕ್ರಿಕೆಟ್. ಈಗ ತಾನೇ ೨೦೧೯ ವಿಶ್ವ ಕಪ್ ಮುಗಿದಿದೆ. ಇಂಗ್ಲೆಂಡ್ ಗೆದ್ದಿದ್ದಾರೆ. ಇಷ್ಟೆಲ್ಲಾ ಆಟಗಳನ್ನ ಅಡಿ, ಅನೇಕರ ಸಮಯ ವ್ಯರ್ಥ ಮಾಡಿ, ಕಡೆಯಲ್ಲಿ ಒಂದೇ ತಂಡ ಗೆಲ್ಲೋದಾದ್ರೆ ಇದು ತುಂಬಾ inefficient. ನೀವು ಈಗಾಗಲೇ ಊಹಿಸಿರೋ ಹಾಗೆ, ಇಲ್ಲೂ ಕೂಡ AI/ML ಬಳಕೆಗೆ ಸಾಕಷ್ಟು ಅವಕಾಶ ಇದೆ. ಪಾಕಿಸ್ತಾನದ ವಿರುದ್ಧ ಭಾರತ ವಿಶ್ವ ಕಪ್ ಅಲ್ಲಿ ಯಾವಾಗಲೂ ಗೆದ್ದಿದ್ದು, ಭಾರತ ತಂಡ ವಿಶ್ವ ಕಪ್ ಮುಂಚಿನ ಹಲವಾರು ತಿಂಗಳಲ್ಲಿ ಅತ್ಯುತ್ತಮವಾಗಿ ಅಡಿ ಹಲವಾರು ಪಂದ್ಯಗಳನ್ನು ಗೆದ್ದಿದ್ದರು. ಈ ಎಲ್ಲಾ ಮಾಹಿತಯನ್ನು AI/ML ಮೂಲಕ ಪರಿಶೀಲಿಸಿ ಭಾರತ ಪಾಕಿಸ್ತಾನ ಆಡುವ ಅವಶ್ಯಕತೆಯೇ ಇಲ್ಲವೆಂದು ನಿರ್ಧರಿಸಬಹುದಿತ್ತು. ಹೀಗೆ ಅವಶ್ಯವಿರುವ ಪಂದ್ಯಗಳನ್ನು ಮಾತ್ರ ಅಡೋದ್ರಿಂದ ಪಂದ್ಯಗಳು ಕುತೂಹಲಕಾರಿ ಆಗಿರುತ್ತೆ. ಹೆಚ್ಚಿನ ವೀಕ್ಷಣೆ ಇರುತ್ತೆ. ಇದು ಪ್ರಾಯೋಜಕರಿಗೆ ಪ್ರಯೋಜನಕಾರಿಯೂ ಆಗಿರುತ್ತೆ.

ಈ ರೀತಿ ಜನಪರ, ಜನಪ್ರಿಯ ಕೆಲಸಗಳನ್ನ AI/ML ಮೂಲಕ ಮಾಡುವುದರಿಂದ AI/ML, ನಮ್ಮೆಲ್ಲರ AI/ML ಆಗಿ ಮೂಡುತ್ತೆ. 

-ಹರೀಶ